ಸುಸ್ವಾಗತ
ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ, ಬೆಂಗಳೂರು ಕ್ಷೇತ್ರವು ಕರ್ನಾಟಕ ಸರ್ಕಾರದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ಬರುವ ಒಂದು ಸಂಸ್ಥೆಯಾಗಿರುತ್ತದೆ.ಈ ಕ್ಷೇತ್ರವು ರೈತರಿಗೆ ಹೈನುಗಾರಿಕೆ ತರಬೇತಿ, ಮೇವು ಅಭವೃದ್ಧಿ, ಸುಧಾರಿತ ಪಶುಪಾಲನಾ ಪದ್ಧತಿಗಳು, ಉತ್ತಮ ವಂಶಾವಳಿಯುಳ್ಳ ಹೋರಿಗಳಿಂದ ಘನೀಕೃತ ವೀರ್ಯ ಉತ್ಪಾದನೆ, ರೈತರಿಗೆ ಉತ್ತಮ ಮೇವು ಬೆಳೆಗಳ ಬೀಜ ಹಾಗೂ ಹುಲ್ಲು ಬೇರುಗಳ ವಿತರಣೆ, ಶುದ್ಧ ತಳಿ ಹಸುಗಳ ಸಾಕಾಣಿಕೆ, ಭ್ರೂಣ ವರ್ಗಾವಣೆ ತಂತ್ರಜ್ಞಾನ ಮತ್ತು ವಿವಿಧ ಪಶುವೈದ್ಯಕೀಯ ಮಹಾವಿದ್ಯಾಲಯಗಳ ಕಿರಿಯ ಪಶುವೈದ್ಯರಿಗೆ ಇಂಟರ್ನ್ ಶಿಪ್ ತರಬೇತಿ ನೀಡುವ ಧ್ಯೇಯೋದ್ದೇಶಗಳನ್ನು ಹೊಂದಿರುತ್ತದೆ.
ಈ ಕ್ಷೇತ್ರದಲ್ಲಿರುವ ಘನೀಕೃತ ವೀರ್ಯ ನಳಿಕೆಗಳ ಉತ್ಪಾದನಾ ಘಟಕದಲ್ಲಿ ಅಂತರ ರಾಷ್ಟ್ರೀಯ ಸಂಸ್ಥೆಯ ಗುಣಮಟ್ಟದ ಪ್ರಕಾರ ಉತ್ತಮ ಗುಣಮಟ್ಟ ಹಾಗೂ ಪ್ರಮಾಣದ ಘನೀಕೃತ ವೀರ್ಯ ನಳಿಕೆಗಳ ಉತ್ಪಾದನೆ ಮಾಡಬಹುದಾದಂತಹ ಉದ್ದಿಮೆ ದರ್ಜೆಯ ಹೋರಿಗಳು ಮತ್ತು ಸೌಕರ್ಯಗಳನ್ನು ಹೊಂದಿರುವುದರಿಂದ ISO 9001:2008 ದೃಢೀಕರಣ ಪ್ರಮಾಣ ಪತ್ರ ಪಡೆಯಲಾಗಿದೆ.
- ಸೂಚನೆ -
ವೆಬ್ ಸೈಟಿನ ಮಾಹಿತಿಯ ಒಡೆತನ, ನಿರ್ವಹಣೆ ಮತ್ತು ನವೀಕರಣ ರಾಜಾಸಂತಕೇಂದ್ರದ್ದಾಗಿರುತ್ತದೆ
ವೆಬ್ ಸೈಟಿನ ಮಾಹಿತಿ ಬಗೆಗಿನ ವಿಚಾರಣೆಗಳನ್ನು ddslbtc-ka@nic.in ವಿಳಾಸಕ್ಕೆ ಕಳುಹಿಸಿಕೊಡುವುದು