ತರಬೇತಿ ಕಾರ್ಯಾಕ್ರಮ

ರೈತರಿಗೆ ತರಬೇತಿ
ರೈತರಿಗೆ ತರಬೇತಿ ಕಾರ್ಯಾಕ್ರಮವನ್ನು ಪ್ರತಿ ತಿಂಗಳು ಸೋಮವಾರದಿಂದ ಶನಿವಾರದವರೆಗೆ (ಆರು ದಿನಗಳು) ಆಯೋಜಿಸಲಾಗುವುದು. ಈ ತರಬೇತಿ ಕಾರ್ಯಾಕ್ರಮದಲ್ಲಿ ಹೈನುಗಾರಿಕೆ, ಆಧುನಿಕ ಪಶುಪಾಲನಾ ಪದ್ಧತಿಗಳು ಮತ್ತು ಮೇವು ಉತ್ಪಾದನೆಯ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ತರಬೇತಿ ನೀಡಲಾಗುವುದು. ಆರು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರಗಳನ್ನು ವಿತರಿಸಲಾಗುವುದು.ಇಂಟರ್ನ್ ಷಿಪ್ ತರಬೇತಿ
ಈ ಕಾರ್ಯಕ್ರಮದ ಅಡಿಯಲ್ಲಿ ದೇಶದ ವಿವಿಧ ಪಶುವೈದ್ಯಕೀಯ ಮಹಾವಿದ್ಯಾಲಯಗಳ ಅಂತಿಮ ವರ್ಷದ ಕಿರಿಯ ಪಶುವೈದ್ಯರು ತರಬೇತಿ ಪಡೆಯುತ್ತಾರೆ. ಈ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಓದಿದ ವಿಷಯಗಳ ಬಗ್ಗೆ ಪ್ರಾಯೋಗಿಕವಾಗಿ ಕ್ಷೇತ್ರದ ವಿವಿಧ ಚಟುವಟಿಕೆಗಳು, ಪಶುಪಾಲನಾ ಪದ್ಧತಿಗಳು, ವೀರ್ಯ ಸಂಗ್ರಹಣೆ, ಸಂಸ್ಕರಣೆ, ಶೇಖರಣೆ, ಘನೀಕೃತ ವೀರ್ಯ ನಳಿಕೆಗಳ ಸೂಕ್ತ ಬಳಕೆ ಮತ್ತು ನಿರ್ವಹಣೆ, ದಾಖಲಾತಿ ನಿರ್ವಹಣೆ, ಸಂವಹನಾ ಕೌಶಲ್ಯ ಮತ್ತು ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯ ಬಗ್ಗೆ ತರಬೇತಿ ನೀಡಲಾಗುತ್ತದೆ.ಪುನಶ್ಚೇತನ ತರಬೇತಿ
ಸರ್ಕಾರದ ವಿವಿಧ ಸಂಸ್ಥೆಗಳಿಂದ ಭಾಗವಹಿಸುವ ಅಧಿಕಾರಿಗಳಿಗೆ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಹಾಗೂ ಪಶುಪಾಲನಾ ಮತ್ತು ಮಶುವೈದ್ಯಕಿಯ ಸೇವಾ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಪುನಶ್ಚೇತನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.ಇತರೆ ತರಬೇತಿ
ವಿವಿಧ ಸಹಕಾರ ಸೇವಾ ಸಂಘ/ಸಂಸ್ಥೆಗಳ ಸದಸ್ಯರುಗಳು, ಮಹಿಳಾ ಸಹಕಾರ ಸಂಸ್ಥೆಯ ಸದಸ್ಯರುಗಳು, ಶಾಲಾ ಮಕ್ಕಳು ಮತ್ತು ದೇಶದ ವಿವಿಧ ರಾಜ್ಯಗಳ ರೈತರು ಪೂರ್ವಾನುಮತಿಯನ್ನು ಪಡೆದು ಈ ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡಿ ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಮಾಹಿತಿ/ತರಬೇತಿಯನ್ನು ಪಡೆಯುತ್ತಾರೆ.