ಶುದ್ಧ ತಳಿ
Pure Breed Jersey Herd ಶುದ್ಧ ಜರ್ಸಿ ತಳಿಯ ಹಸುಗಳನ್ನು ಕ್ಷೇತ್ರದಲ್ಲಿ ಹೊಂದಿದ್ದು, ಅವುಗಳನ್ನು ಹಾಲು ಉತ್ಪಾದನೆ, ರೈತರಿಗೆ ಪ್ರಾಯೋಗಿಕ ಪ್ರಾತ್ಯಕ್ಷತೆ, ಕಿರಿಯ ಪಶುವೈದ್ಯರುಗಳಿಗೆ ನಿರ್ವಹಣಾ ಪದ್ಧತಿಗಳ ಕಲಿಕೆ ಹಾಗೂ ಭ್ರೂಣ ವರ್ಗಾವಣೆ ತಂತ್ರಜ್ಞಾನದಿಂದ ಉತ್ತಮ ಇಳುವರಿ ಹೊಂದಿರುವ ಶುದ್ಧ ತಳಿ ಹೊರಿಗಳನ್ನು ಪಡೆಯಲು ಬಳಸಲಾಗುತ್ತಿದೆ.

ಅತ್ಯುನ್ನತ ವಂಶಾವಳಿಯ ಶುದ್ಧ ತಳಿ ಜರ್ಸಿ, ಹೆಚ್.ಎಫ್. ಹೊರಿಗಳನ್ನು ಹಾಗೂ ಮುರ್ರಾ, ಸೂರ್ತಿ ಕೋಣಗಳನ್ನು ಘನೀಕೃತ ವೀರ್ಯ ಉತ್ಪಾದನೆಗೆ ಪ್ರತ್ಯೇಕವಾಗಿ ಕ್ಷೇತ್ರದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.

ಕ್ಷೇತ್ರದಲ್ಲಿರುವ ಶುದ್ಧ ತಳಿ ಜಾನುವಾರುಗಳು ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿಲ್ಲ. ಕ್ಷೇತ್ರದಲ್ಲಿ ಹುಟ್ಟಿದ ಗಂಡು ಕರುಗಳನ್ನು ಘನೀಕೃತ ವೀರ್ಯ ನಳಿಕೆಗಳ ಉತ್ಪಾದನೆಗೆ ಹಾಗೂ ಹೆಣ್ಣು ಕರುಗಳನ್ನು ಹಾಲಿನ ಉತ್ಪಾದನೆಗೆ ಬಳಸಲಾಗುತ್ತದೆ. ನಿರುಪಯುಕ್ತವೆಂದು ವಿಲೇವಾರಿ ಮಾಡಿದ ರಾಸುಗಳನ್ನು ಪ್ರಾಣಿದಯಾ ಸಂಘಗಳಿಗೆ ವರ್ಗಾಯಿಸಲಾಗುವುದು.

ಪ್ರಸ್ತುತ, ಕ್ಷೇತ್ರದಲ್ಲಿರುವ ಶುದ್ಧ ತಳಿ ರಾಸುಗಳ ವಿವರ ಈ ಕೆಳಕಂಡಂತಿದೆ:

ತಳಿಹೋರಿಹಸುಮಣಕಕರುಒಟ್ಟು
ಜರ್ಸಿ2032022882
ಹೆಚ್.ಎಫ್.1401----15
ಮುರ್ರಾ24----2044
ಸೂರ್ತಿ02------02
ಒಟ್ಟು143