ಘನೀಕೃತ ವೀರ್ಯ
Frozen Semen Laboratory ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಹಿಂದೆ ನಡೆಸಲಾಗುತ್ತಿದ್ದ ಶೀಥಲೀಕೃತ ದ್ರವ ವೀರ್ಯದ ಉತ್ಪಾದನೆಯ ತಾಂತ್ರಿಕತೆಯನ್ನು 1985 ರಲ್ಲಿ ಘನೀಕೃತ ವೀರ್ಯ ಉತ್ಪಾದನೆಗೆ ಉನ್ನತೀಕರಿಸಲಾಯಿತು. ಈ ಕ್ಷೇತ್ರದಲ್ಲಿ ಅತ್ಯುತ್ತಮ ಹಾಲಿನ ಉತ್ಪಾದನೆಯ ಸಾಮರ್ಥ್ಯದ ವಂಶಾವಳಿಯನ್ನು ಹೊಂದಿರುವ ಹೆಚ್. ಎಫ್. ಮತ್ತು ಜರ್ಸಿ ಹೋರಿಗಳು ಹಾಗೂ ಸೂರ್ತಿ ಮತ್ತು ಮುರ್ರಾ ಕೋಣಗಳಿಂದ ಉತ್ಪಾದಿಸಿದ ಘನೀಕೃತ ವೀರ್ಯ ನಳಿಕೆಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವಿವಿಧ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ಕೃತಕ ಗರ್ಭಧಾರಣೆಗೆ ಕರ್ನಾಟಕ ರಾಜ್ಯಾದ್ಯಂತ ಬಳಸಲಾಗುತ್ತಿದೆ. ಈ ಕ್ಷೇತ್ರವು ಉತ್ತಮ ವಂಶಾವಳಿಯ ಹೋರಿಗಳ ನಿರ್ವಹಣೆ, ಉತ್ತಮ ಗುಣಮಟ್ಟದ ಘನೀಕೃತ ವಿರ್ಯದ ಉತ್ಪಾದನೆ ಹಾಗೂ ನಿರ್ವಹಣೆಗಾಗಿ ISO 9001:2008 ದೃಢೀಕರಣ ಹೊಂದಿದೆ.

ಕ್ಷೇತ್ರದಲ್ಲಿ ನಿರ್ವಹಿಸಲಾಗುತ್ತಿರುವ ಹೋರಿ ಮತ್ತು ಕೋಣಗಳ ಸಂಖ್ಯೆ ಈ ಕೆಳಕಂಡಂತಿದೆ:

ತಳಿಜರ್ಸಿಹೆಚ್. ಎಫ್.ಮುರ್ರಾಸೂರ್ತಿ
Strength20144402
Total80


ಕ್ಷೇತ್ರದಲ್ಲಿ ವಾರ್ಷಿಕ ಹತ್ತು ಲಕ್ಷ ಘನೀಕೃತ ವೀರ್ಯ ನಳಿಕೆಗಳ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದ್ದು, ಉತ್ಪಾದಿಸಲಾದ ವೀರ್ಯ ನಳಿಕೆಗಳನ್ನು ಜನಕ ಮೌಲ್ಯ ನಿರ್ಣಯ ಕೋಶ, ಹೆಬ್ಬಾಳಕ್ಕೆ ಕಳುಹಿಸಲಾಗುವುದು. ಅಲ್ಲಿಂದ ಅವುಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಇಲಾಖೆಯ ಸೇವಾ ಕೇಂದ್ರಗಳ ಮೂಲಕ ರೈತರ ರಾಸುಗಳಿಗೆ ಕೃತಕ ಗರ್ಭಧಾರಣೆಗೆ ಬಳಸಲಾಗುವುದು.

ವಿವಿಧ ಪಶುವೈದ್ಯಕೀಯ ವಿದ್ಯಾಲಯಗಳಿಂದ ಪಶುವೈದ್ಯಕೀಯ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವರ ಇಂಟರ್ನ್ ಷಿಪ್ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಹೋರಿಗಳ ನಿರ್ವಹಣೆ, ಉತ್ತಮ ಗುಣಮಟ್ಟದ ಘನೀಕೃತ ವೀರ್ಯ ನಳಿಕೆಗಳ ಉತ್ಪಾದನೆ, ಗುಣಮಟ್ಟ ಪರೀಕ್ಷೆ, ನಿರ್ವಹಣೆ, ದಾಸ್ತಾನು, ಬಳಕೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುವುದು.