ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ
Counselling about Dairying ಪ್ರ. ರೈತರ ತರಬೇತಿಯ ಪ್ರಮುಖ ಉದ್ದೇಶವೇನು?
ಈ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಹೈನುಗಾರಿಕೆ ಮತ್ತು ಮೇವು ಉತ್ಪಾದನೆಯ ಬಗ್ಗೆ ಸೂಕ್ತ ಮಾಹಿತಿ ಒದಗಿಸಲಾಗುವುದು.

ಪ್ರ. ತರಬೇತಿಯ ಭಾಷಾ ಮಾಧ್ಯಮ ಯಾವುದು?
ಕನ್ನಡ ಮಾಧ್ಯಮದಲ್ಲಿ ಮಾತ್ರ ತರಬೇತಿ ನೀಡಲಾಗುವುದು.

ಪ್ರ. ತರಬೇತಿಯಲ್ಲಿ ಯಾರು ಭಾಗವಹಿಸಬಹುದು?
ಹೈನುಗಾರಿಕೆ ಹಾಗೂ ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಯಾರೇ ರೈತರು, ರೈತಮಕ್ಕಳು, ರೈತ ಮಹಿಳೆಯರು ಮತ್ತು ನಿರುದ್ಯೋಗಿ ಯುವಕ/ಯುವತಿಯರು ತರಬೇತಿಯಲ್ಲಿ ಭಾಗವಹಿಸಬಹುದು.

ಪ್ರ. ತರಬೇತಿ ಪಡೆಯಲು ಶುಲ್ಕ ಪಾವತಿಸಬೇಕೆ?
ಇಲ್ಲ, ತರಬೇತಿಯು ಉಚಿತ. ವಸತಿ, ಊಟ ಹಾಗೂ ಬಂದು ಹೋಗುವ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕಾಗುತ್ತದೆ.

ಪ್ರ. ತರಬೇತಿಯ ನಂತರ ಪ್ರಮಾಣ ಪತ್ರ ದೊರೆಯುತ್ತದೆಯೇ?
ಹೌದು, ತರಬೇತಿಯ ಪೂರ್ಣ ಅವಧಿಯ ನಂತರ ಅರ್ಹತಾ ಪತ್ರ ನೀಡಲಾಗುವುದು. ಇದಕ್ಕಾಗಿ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ತರಬೇಕು.

ಪ್ರ. ಅರ್ಹತಾ ಪತ್ರ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆಯಲು ಸಹಾಯಕವಾಗುತ್ತದೆಯೇ?
ಹೌದು, ಈ ಪ್ರಮಾಣ ಪತ್ರವು ಹೈನೋದ್ಯಮಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಅಥವಾ ಸಹಕಾರ ಸಂಘಗಳಿಂದ ಸಾಲ ಸೌಲಭ್ಯ ಪಡೆಯಲು ಉಪಯುಕ್ತ.

ಪ್ರ. ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಹಾಸ್ಟೆಲ್ ಸೌಲಭ್ಯವಿದೆಯೇ?
ಹೌದು, ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಹಾಸ್ಟೆಲ್ ಸೌಲಭ್ಯ ಇರುತ್ತದೆ.

ಪ್ರ. ಊಟ-ವಸತಿಯ ವ್ಯಯಸ್ಥೆ ಉಚಿತವೆ?
ಅಭ್ಯರ್ತಿಯು ವಸತಿಗಾಗಿ ದಿನವೊಂದಕ್ಕೆ ರೂ.5 ಮಾತ್ರ ಪಾವತಿಸಬೇಕಾಗುತ್ತದೆ. ದಿನಸಿ ವಸ್ತುಗಳನ್ನು ಅಭ್ಯರ್ಥಿಗಳು ಒದಗಿಸಿಕೊಟ್ಟಲ್ಲಿ ಅಡಿಗೆ ತಯಾರಿಸಿಕೊಡುವ ವ್ಯವಸ್ಥೆ ಮಾಡಲಾಗುವುದು.

ಪ್ರ. ಮುಂದಿನ ತರಬೇತಿ ಶಿಬಿರ ಯಾವಾಗ ಪ್ರಾರಂಭವಾಗುತ್ತದೆ?
ಸದರಿ ತಿಂಗಳ ತರಬೇತಿ ದಿನಾಂಕಗಳನ್ನು ಈ ವೆಬ್ ಸೈಟ್ ನಲ್ಲಿ ನೀಡಲಾಗುವುದು. ಹಾಗೂ, ಕಛೇರಿ ವೇಳೆಯಲ್ಲಿ ದೂರವಾಣಿ ಮೂಲಕವೂ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಪ್ರ. ತರಬೇತಿಯಲ್ಲಿ ಯಾವ ಯಾವ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು?
ಹೈನುಗಾರಿಕೆ ಮತ್ತು ಮೇವು ಉತ್ಪಾದನೆಯ ಎಲ್ಲಾ ಮಾಹಿತಿಗಳನ್ನು ಸೂಕ್ತ ಪ್ರಾಯೋಗಿಕ ಪ್ರಾತ್ಯಕ್ಷತೆಗಳೊಂದಿಗೆ ಒದಗಿಸಲಾಗುವುದು.

ಪ್ರ. ತರಬೇತಿ ಪಡೆಯಲು ಮುಂಗಡವಾಗಿ ನೋಂದಣಿ ಮಾಡಿಸಬೇಕೆ?
ಅಗತ್ಯವಿಲ್ಲ. ಅಭ್ಯರ್ಥಿಗಳು ತರಬೇತಿ ಪ್ರಾರಂಭದ ದಿನದಂದೇ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನೋಂದಣಿ ಮಾಡಿಸಬಹುದು.

ಪ್ರ. ರೈತರಿಗೆ ಕೃತಕ ಗರ್ಭಧಾರಣೆಯ ತರಬೇತಿ ನೀಡಲಾಗುವುದೇ?
ಇಲ್ಲ, ರೈತರಿಗೆ ಕೃತಕ ಗರ್ಭಧಾರಣಾ ತಾಂತ್ರಿಕತೆಯನ್ನು ಕಲಿಸಲಾಗುವುದಿಲ್ಲ.

ಪ್ರ. ಇತರೆ ಸಂಸ್ಥೆಗಳಿಂದ ನಿಮ್ಮ ಕ್ಷೇತ್ರಕ್ಕೆ ಭೇಟಿ ನಿಡಬಹುದೇ?
ಪೂರ್ವಾನುಮತಿಯೊಂದಿಗೆ ಅನ್ವಯವಾಗುವ ಜೈವಿಕ-ನಿಯಂತ್ರಣ ಮುನ್ನೆಚ್ಚರಿಕಾ ಷರತ್ತುಗಳಿಗೆ ಒಳಪಟ್ಟು ಕ್ಷೇತ್ರಕ್ಕೆ ಭೇಟಿ ನೀಡಬಹುದು.

ಪ್ರ. ನಿಮ್ಮ ಕ್ಷೇತ್ರದಿಂದ ರಾಸುಗಳನ್ನು ಖರೀದಿಸಬಹುದೇ?
ಇಲ್ಲ. ಇಲ್ಲಿನ ರಾಸುಗಳನ್ನು ತಳಿ ಅಭಿವೃದ್ಧಿ ಹಾಗೂ ವಿರ್ಯೋತ್ಪಾದನೆಗಾಗಿ ಮಾತ್ರ ಬಳಸಲಾಗುವುದು.

ಪ್ರ. ನಿಮ್ಮ ಕ್ಷೇತ್ರದಿಂದ ಮೇವಿನ ಬಿಜ ಹಾಗೂ ಹುಲ್ಲು ಬೇರುಗಳನ್ನು ರೈತರು ಖರೀದಿಸಬಹುದೇ?
ಹೌದು. ರೈತರು ವಿವಿಧ ಮೇವಿನ ಬೆಳೆಗಳ ಹುಲ್ಲು ಬೇರುಗಳನ್ನು ಮಾತ್ರ 1000 ಬೇರುಗಳಿಗೆ ರೂ.100 ರಂತೆ ಪಾವತಿಸಿ ಖರೀದಿಸಬಹುದು.