ಭ್ರೂಣ ವರ್ಗಾವಣೆ ತಂತ್ರಜ್ಞಾನ
Embryo Transfer Technology Laboratory ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತಮ ವಂಶಾವಳಿ ಇರುವ ಹೋರಿ ಕರುಗಳು ಮತ್ತು ಹೆಣ್ಣು ಕರುಗಳ ಸಂತಾನಾಭಿವೃದ್ಧಿಗಾಗಿ ಭ್ರೂಣ ವರ್ಗಾವಣೆ ತಂತ್ರಜ್ಞಾನವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ತಂತ್ರಜ್ಞಾನದ ಫಲದಿಂದ ಜನಿಸಿದ ಹೋರಿ ಕರುಗಳನ್ನು ಘನೀಕೃತ ವೀರ್ಯ ಉತ್ಪಾದನೆಗೆ ಬಳಸಲಾಗುವುದು. ಹೀಗೆ ಉತ್ಪಾದಿಸಿದ ಘನೀಕೃತ ವೀರ್ಯ ನಳಿಕೆಗಳನ್ನು ರಾಜ್ಯದ ದೇಶೀಯ ತಳಿ ಹಸುಗಳ ಇಳುವರಿಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಗಾಗಿ ಉಪಯೋಗಿಸಲಾಗುತ್ತದೆ. ಈ ತಂತ್ರಜ್ಞಾನದಿಂದ ಜನಿಸಿದ ಹೆಣ್ಣು ಕರುಗಳನ್ನು ಸಂತಾನಾಭಿವೃದ್ಧಿಗಾಗಿ ಬಳಸಲಾಗುವುದು.